ಜೀವನ್ಮೃತ ಮನಸಿಗೆ
ಕನಸುಗಳ ಕಂಬದ ಆಸರೆ
ರೋಸಿದ ಹೃದಯಕೂ
ಆಶೆಯ ಪ್ರೀತಿಯ ಚಿಗುರು ...
ಸಾಗುವ ದಾರಿಯ ಕೊನೆಗೆ
ಕಾಣದ ಬೆಳಕಿನ ಕರೆಯು
ಹಿಂದೆ ಬಿಟ್ಟು ಬಂದಷ್ಟೇ ನೆನಪುಗಳು
ಮುಂದೆ ತೆರೆದುಕೊಳ್ಳುವ ಸುಂದರ ಪರಿಯು ...
ಆಗಸದ ಬಾಗಿನ ತುದಿಗೆ
ಹಾದಿಯ ಚೂಪು ಮೊನೆಯು
ಕೈಗೆಟುಕಿದ ಬೆಟ್ಟದ ಹೂವಿನ ಪರಿಮಳದ ಸೊಗವು
ಪಯಣಿಗನ ಶಾಂತಿಯ ನಿಟ್ಟುಸಿರು ...
No comments:
Post a Comment