Friday, September 4, 2009

ಆ ಕ್ಷಣ

ಹೊಳೆಯಾಯ್ತು ಮನಸು
ಎಲ್ಲೆಲ್ಲೂ ಕೆಂಪು ಪಸರಿಸಿತು
ಕಣ್ಣೀರು ಉಕ್ಕಿ ಹರಿದು
ಹಸಿಯಾದ ಕೆನ್ನೆಗೆ
ಮುತ್ತನಿಟ್ಟ , ಗೆಳೆಯ!

ಹೀಗೇಕೆ?

ನಿನ್ ಬೆರಳ ಕುಂಚದಲಿ ಮೈ ತುಂಬ
ಅರಿಶಿಣದ ಚಿತ್ತಾರ ಮಾಡಲೇಕೆ?

ರಕ್ತದಿಂದಾದರೂ ಸರಿ, ಹಣೆ ಮೇಲೆ
ಕುಂಕುಮವ ತೀಡಲೇಕೆ?

ನಿನ್ ಹೃದಯ ಕೋಟೆಯ ಪಟ್ಟದರಸಿ ಆಗಲಾರದ ನನ್ನನ್ನು
ಕೇವಲ ದಾಸಿ ಮಾಡಿಕೊಳ್ಳಲೇಕೆ ?

ಕಾದಿರುವೆ ಅರಸ ಕೋಟೆ ಬಾಗಿಲ ಸಂದಿಯಲ್ಲೇ,
ಕಣ್ ದೃಷ್ಟಿ ಒಮ್ಮೆಯೂ ನನ್ನತ್ತ ಹರಿಸಲೇಕೆ ??