ಸಾಗರದ ಸಿಂಹ ಘರ್ಜನೆಯಲ್ಲೂ ,
ಝುಳು ಝುಳು ಹರಿಯುವ ತೊರೆಯ ಕೊರಳಲ್ಲೂ,
ಹಕ್ಕಿಗಳ ಮುಂಜಾನೆ ಹಾಡಿನಲ್ಲೂ,
ನನ್ನನ್ನೇ ಕರೆಯುತಿಹ ಧ್ವನಿ ಅದ್ಯಾವುದೋ?!
ಮೋಡದ ಅಂಚಿನ ಸಂಜೆ ಸೂರ್ಯನ ಹೊಂಗಿರಣದಲ್ಲೂ,
ಚಂದಿರನಿಲ್ಲದ ರಾತ್ರಿಯ ದೀಪದ ಹುಳುವಿನ ಕಾನ್ತಿಯಲ್ಲೂ,
ಕಾಮನ ಬಿಲ್ಲಿನ ಬಾಗಿನ ಚಿತ್ತಾರದಲ್ಲೂ,
ನನ್ನೇ ನೋಡುತಿರುವ ಆ ಕಣ್ಣ್ಯಾವುದೊ?!
ಚಿಗುರೆಲೆಯ ಹಸಿರಿನ ಹುರುಪಿನಲ್ಲೂ,
ಹೊಸ ಹೂವಿನ ನವಿರಾದ ಕಂಪಿನ್ನಲ್ಲೂ,
ಮಳೆ ಬಿದ್ದ ಮಣ್ಣಿನ ಸುವಾಸನೆಯಲ್ಲೂ,
ತನ್ನ ಉಸಿರು ಬೆರೆಸಿ ನನಗೆ ಕಚಗುಳಿ ಇದುತಿರುವ ಆ ಕೈಯಾವುದೋ?!
Hi Kavya, poems are well written. keep it up.
ReplyDelete