ಹಸಿರು ತುಂಬಿತ್ತು ಹೃದಯದ ಹೊಲದಲ್ಲಿ,
ಪ್ರೀತಿಯ ಮಳೆಯ ಕೃಪೆಯಿಂದ!
ಶಾಂತಿ,ನೆಮ್ಮದಿಯ ಬೆಳೆಯೇ ಬೆಳೆದೆ,
ಮುತ್ತಿನ ಕಣವನ್ನೇ ಅವಳ ಅಂಗಳದಲ್ಲಿರಿಸಿದೆ;
ನನ್ನ ಆಗಮನಕ್ಕೆ ಕಾದು ನಿಂತಂತೆ
ಬಾಗಿಲು ಸದಾ ತೆರೆದಿದ್ದಳು.
ಇಂದು ಬರಗಾಲ, ಅದು ನನ್ನ ತಪ್ಪಲ್ಲ,
ಮನೆಯೋಳಗಿದ್ದೆ ಬೀಗ ಹಾಕಿದ್ದಾಳೆ ಬಾಗಿಲಿಗೆ!!
ಬಾಗಿಲೋಡಿಯಲೋ? ಅಥವಾ ಬೀಗ ಹುಡುಕಲೊ?!
No comments:
Post a Comment