ತಿರುಗಿ ಬರುವವಾ
ಆ ದಿನಗಳು ಮತ್ತೆ?
ಸಿಗದ ಡಬ್ಬದಿಂದ ಕದ್ದು ತಂದ
ಆ ಸಿಹಿ ತಿನಿಸುಗಳು,
ನನ್ನ್ನ ಬದಲು ಹೊಡೆಸಿಕೊಂಡ
ಆ ಹೊಡೆತಗಳು;
ಮಳೆಯಲಿ ನೆನೆದು ಬರುವಾಗ
ಕೈ ಹಿಡಿದು ಕೊಡೆಯಲಿ ಕರೆದ ಕ್ಷಣಗಳು,
ಅಮ್ಮ ಬೈದಾಗ,
ಅಳುವ ಕಣ್ಣೊರೆಸಿದ ಆ ದಿನಗಳು;
ತಿರುಗುವ ಬುಗುರಿಯ
ಅಂಗೈಯಲ್ಲಿ ಆಡಿಸಲು ಕೊಟ್ಟ ಕ್ಷಣಗಳು,
ಜಾತ್ರೆಯ ಪೀಪಿಯ
ಕಿವಿಯಲಿ ಊದಿದ ಆ ದಿನಗಳು;
ಮನಸಲೆ ಕೂತು ಕೂಗುವ ಗೆಳೆಯ,
ಹೇಳು ನೀನು..
ತಿರುಗಿ ಬರುವವಾ ಆ ಕ್ಷಣಗಳು ಮತ್ತೆ?
ಬಾಲ್ಯ ಎಷ್ಟು ಮಧುರ...
ReplyDeleteನಿಮ್ಮ ಈ ಕಾವ್ಯ ಕೂಡಾ ಅಷ್ಟೇ ಸುಂದರವಾಗಿದೆ ಎಂದಷ್ಟೇ ಹೇಳಬಲ್ಲೆ....