Thursday, October 1, 2009

ನೀನು ನನ್ನವನಾಗಬೇಕು

ಅಲೆಗಳ ತೆರನಲ್ಲಿ ತೀರ ಸೇರುತಿರುವ
ನಿನ್ನ ನಗುವಿಗೆ
ಗೋಡೆ ಕಟ್ಟಿ ಬಂಧನ ಹಾಕುವೆ;
ಅವು ನನ್ನವಾಗಬೇಕು!

ದಶ ದಿಕ್ಕಲೂ ಓಡುತಿರುವ
ನಿನ್ನ ಮಾತುಗಳನು
ಹಗ್ಗ ಹಾಕಿ ಎಳೆದು ತರುವೆ;
ಅವು ನನ್ನವಾಗಬೇಕು!

ನಿನ್ನ ಕೈ ಹಿಡಿದು ವಿಹರಿಸುತ್ತಿರುವ
ಕೈ ಕೊಚ್ಚಿ ಹಾಕಿ
ನಿನ್ನ ಕರೆತರುವೆ;
ಅವು ನನ್ನವಾಗಬೇಕು!

ನೋವಿನಲೂ, ನಲಿವಿನಲೂ,
ಸರಸದಲೂ, ವಿರಹದಲೂ,
ಬಾಳ ಪ್ರತಿ ಹೆಜ್ಜೆಯಲೂ
ನಾನೇ ಇರಬೇಕು ನಿನ್ನೊಡನೆ;
ನೀನು ನನ್ನವನಾಗಬೇಕು!!

1 comment:

  1. ಪ್ರಬುಧ್ದ ಮನಸ್ಸಿಗೆ ಕನ್ನಡಿ ಹಿದಿದಂತಿದೆ ಈ ಕವನ....

    ReplyDelete