Sunday, September 19, 2010

ಬಿನ್ನಹ

ನಿನ್ನ ಇರುವಿಕೆಯ ಅರಿವಲ್ಲಿ,
ಹೆಚ್ಚಿದ ಎದೆಬಡಿತವ ಕದ್ದಾಲಿಸಿದೆಯಾ ?
ಗುಂಪು ಗವಿಯಲ್ಲಿ ತಿಳಿಯದೆ ಸೋಕಿದ
ಕೈ ನೋಡಿ , ನೀನೂ ನಕ್ಕೆಯಾ?
ನನ್ನೆರಡು ಮೌನ ಕಂಗಳಲು
ನಿನ್ನ ಬಿಂಬವ ನೋಡಿ, ಹಿಗ್ಗಿದೆಯಾ?
ಹುಣ್ಣಿಮೆ ಚಂದ್ರನ ಬೊಗೆಸೆಯಲೇ ಹಿಡಿದು
ನನ್ನ ಮುಡಿಗೇರಿಸುವ ಕನಸು ಕಂಡೆಯಾ?

ಬಾ ಗೆಳೆಯ ...
ನನ್ನ ಕಣ್ಣಿನಲಿ ನಿನ್ನ ಕನಸು ಕಾಣುವ ;
ತುಸು ದೂರವಾದರೂ ಕೈ ಹಿಡಿದು ನಡೆಯುವ!

3 comments: