ಮಾಯೆಯ ಛಾಯೆಯ ಹಿಂಬದಿಯಿಂದ
ಇಣುಕಿ ನೋಡಿವೆ ಕನಸಿನ ಕಾರ್ಮೋಡಗಳು
ಮಳೆ ಸುರಿದದ್ದೇ ಸುರಿದದ್ದು,
ಅಬ್ಬಾ! ಅಂತೂ ನಿಂತಿತು.
ಅಕ್ಕ ಪಕ್ಕದಲ್ಲೆಲ್ಲಾ ಜೀವದ ಅಮೋಘ ನರ್ತನ,
ಹಸಿರಿನ ಚಿತ್ತಾರ,
ಹಾಡುವ ಹಕ್ಕಿಗಳ ಕಲರವ .
ಆದರೆ ಇಲ್ಲಿ,
ನೀರಸ ಭಾವಾಲಿಂಗನ!
ನಿಂತ ನೀರಿನ ಕೊಚ್ಚೆಯಲ್ಲಿ
ಯಾರೂ ಮೂಸದ ಮನಸು
ಕೊಳೆತು ನಾರುತಿದೆ ,
ನೊಣಗಳು ಮುಕ್ಕುತ್ತಿವೆ,
ಕಾಗೆ, ಗಿಡಗಗಳು ಕಿತ್ತು ತಿನ್ನಲು ಹಾತೊರೆಯುತ್ತಿವೆ.
ಇನಿಯನ ಕಿರಣ ಸ್ಪರ್ಶದ ನಿರೀಕ್ಷೆ
ಜೀವ ಮೊಳೆತೀತೆಂಬ ತವಕ
ಅಯ್ಯೋ! ಕಣ್ಣೆವೆಗಳು ಭಾರವಾಗುತ್ತ್ತಿವೆ,
ಮತ್ತೆ ಮಳೆಯಾ?!
ಧೊಪ್ ಎಂದು ಬೀಳುತಿವೆ
ಕಡುಗಪ್ಪು ಹನಿಗಳು.
ಕೊನೆಗೂ ಮುಳುಗಿಹೋದೆ !!
ಕತ್ತಲೆಯೋ ಕತ್ತಲು
ಓಹ್! ಇದು ಸಾವಿನ ಮನೆ!!!
hey.... tumba channagi bardidira...
ReplyDeleteodoke bhaya agbidutthe....
astondu swabhavikavagi....
tumba vaLle baravaNige.....
keep it up....