Saturday, December 27, 2008

ಕಣ್ಮರೆ

ನೆಲವಂದು ಕಂಪಿಸುತ್ತಿತ್ತು
ಗಾಳಿ ನಾಗಲೋಟವಾಡುತಿತ್ತು
ನದಿ, ಝಾರಿಗಳು ಪಾತಾಳಕ್ಕೇ ಹೋಗಿ ಧುಮುಕುತ್ತಿದ್ದವು
ಸೂರ್ಯನು ಇನ್ನಿಲ್ಲವೆಮ್ಬಷ್ಟು ಬೆಂಕಿ ಸುರುಸುತ್ತಿದ್ದ
ಆಕಾಶವು ತನ್ನ ಬಾಯಿಯನ್ನು ತೆರೆದು ನಿಂತಿತ್ತು!
ಆ ಕಂಪಿಸುವ ಮಣ್ಣಿನಲ್ಲೇ ನೀ ನಡೆದೇ
ಕಿವಿ ಕೇಳದಿದ್ದರೂ ನೀ ಧ್ವನಿ ಗುರುತಿಸಿದೆ
ಮೂಕವಾದ ಬಾಯಿಯಿಂದಲೇ ಜಗತ್ತನ್ನು ಕರೆದೆ
ಕುರುಡು ಕಣ್ಣಿನಿಂದಲೇ ಎಲ್ಲವನ್ನೂ ಗ್ರಹಿಸಿದೆ
ಜಡವಾದ ದೇಹವನ್ನೇ ಹೊತ್ತು ನೀ ಅಟ್ಟಹಾಸ ಮೆರೆದೆ

ಇಂದು, ಈ ಹೊತ್ತು, ಎಲ್ಲವೂ ಇಷ್ಟು ಶಾಂತವಾಗಿವೆ
ಮೌನದ ಮೌನವೇ ಎಲ್ಲೆಲ್ಲೂ ಆವರಿಸಿರುವಾಗ ,
ನಿನ್ನ ಸುಳಿವಿಲ್ಲ ! ನೀನೇನಾದೆ ?
ಓ ವಿಶ್ವಾಸನೆ ನೀನೆಲ್ಲಿ ಮರೆಯಾದೆ ?!



No comments:

Post a Comment