ಮನದ ಬಾಗಿಲಲ್ಲೇ ಅಂಗಡಿ ಹಾಕಿದ್ದಾರೆ ಯಾರೋ
ನುಗ್ಗಿ ಒಳ ಹೋಗುವ ಧೈರ್ಯ ಇಲ್ಲ!
ಆಗಲೇ ಒಂದು ಮುಗುಳ್ನಗೆ ನನ್ನ ಸ್ವಾಗತಿಸಿತು.
ಭವ್ಯವಾದ ಅಂಗಡಿಯ ತುಂಬಾ ಬಣ್ಣ ಬಣ್ಣದ ಆಸೆಗಳು;
ಚಿಕ್ಕ ಚಿಕ್ಕ ಆಸೆಗಳು, ಹೆಬ್ಬಯಕೆಗಳು, ಸಾಲು ಸಾಲು ಕನಸುಗಳು !
ಕೆಲವು ಮೊಣಕಾಲ ಉದ್ದದ್ದಲೇ ನಿಲುಕುವಂತೆ
ಕೆಲವು ಕೈಗೆಟುಕದೆ ದೂರ ಬಾನಿನಲ್ಲಿ ತೇಲುವಂತೆ ;
ಕಣ್ಣ ತುಂಬಾ ಆ ಬಣ್ಣಗಳದೇ ನಲಿದಾಟ...
ಕೈ ಚಾಚಿದೆ, ಹಾರಿದೆ, ಮತ್ತೂ ಎತ್ತರಕ್ಕೆ ಜಿಗಿದೆ.
ಅವು ಮೇಲ ಮೇಲಕ್ಕೆ ಹಾರಿದಂತೆ ಭಾಸವಾಯಿತು .
ನಿರಾಶೆಯ ಕಂಬನಿಯೊಂದು ನೆಲಕ್ಕೆ ಬೀಳುವಷ್ಟರಲ್ಲೇ
ಯಾರೋ ನನ್ನ ಬೆನ್ನು ತಟ್ಟಿದಂತಾಯಿತು!
ಮನೋಹರವಾದ ಛಾಯೆಯೊಂದು ನನ್ನನ್ನಾವರಿಸಿತು
ಆ ಅಂಗಡಿಯಾತ ಏಣಿಯೊಂದನ್ನು ನೀಡಿದ ;
ಒಂದು ಚಿಕ್ಕ ನಗೆಯ ಬೆಲೆ ತೆತ್ತು ,
ನಾನು ಏಣಿ ಹತ್ತಲಾರಂಭಿಸಿದೆ !
wow!!! mast bardidira...
ReplyDeletenannge ansida mattige... tumbane channagide....
adbthavada kalpane.....